- kannadadeevige.in
- Privacy Policy
- Terms and Conditions
- DMCA POLICY
Sign up for Newsletter
Signup for our newsletter to get notified about sales and new products. Add any text here or remove it.
- 10th standard
- 9th standard
- 8th Standard
- 1st Standard
- 2nd standard
- 3rd Standard
- 4th standard
- 5th standard
- 6th Standard
- 7th Standard
- ವಿರುದ್ಧಾರ್ಥಕ ಶಬ್ದಗಳು
- ಕನ್ನಡ ವ್ಯಾಕರಣ
- ದೇಶ್ಯ-ಅನ್ಯದೇಶ್ಯಗಳು
- ಕನ್ನಡ ನಿಘಂಟು
- ಭೂಗೋಳ-ಸಾಮಾನ್ಯಜ್ಞಾನ
- ಭಾರತದ ಇತಿಹಾಸ-ಸಾಮಾನ್ಯ ಜ್ಞಾನ
- ಕನ್ನಡ ಕವಿ, ಕಾವ್ಯನಾಮಗಳು
- Life Quotes
ಪ್ರಬಂಧ ಬರೆಯುವ ವಿಧಾನ | How to Write Prabandha in Kannada
ಕನ್ನಡ ಪ್ರಬಂಧ ಬರೆಯುವ ವಿಧಾನ ಹಾಗು ಪ್ರಬಂಧ ಬರೆಯುವುದು ಹೇಗೆ, how to write prabandha in kannada, Prabandha Bareyuva Vidhana in Kannada
ಪ್ರಬಂಧ ಬರೆಯುವ ವಿಧಾನ
ಈ ಲೇಖನದಲ್ಲಿ ನೀವು, ಪ್ರಬಂಧ ಎಂದರೇನು? ಪ್ರಬಂಧದ ಗುರಿ ಪ್ರಬಂಧ ಬರವಣಿಗೆಗೆ ಸಲಹೆಗಳು, ಪ್ರಬಂಧದ ವಿಧಗಳು ಎಷ್ಟು?, ಮುಖ್ಯವಾಗಿ ಮೂರು ಬಗೆಯ ಪ್ರಬಂಧ, ಹಂತಗಳು, ಪೀಠಿಕೆ ಎಂದರೇನು?, ವಿಷಯ ನಿರೂಪಣೆ ,ಉಪಸಂಹಾರ ಎಂದರೇನು?, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಬಂಧ ಬರೆಯಲು ಟಿಪ್ಸ್, ಉತ್ತಮ ಪ್ರಬಂಧದ ಲಕ್ಷಣಗಳು ಇದೆಲ್ಲದರ ಬಗ್ಗೆ ಮಾಹಿತಿಯನ್ನು ಪಡೆಯುವಿರಿ
ಈ ‘ಪ್ರಬಂಧ’ ಎಂಬ ಪದವು ಲ್ಯಾಟಿನ್ ಪದ ‘ಎಕ್ಸಾಜಿಯಂ’ ನಿಂದ ಬಂದಿದೆ. ಪ್ರಬಂಧಗಳು ಒಬ್ಬರ ವಾದ ಅಥವಾ ಒಬ್ಬರ ಅನುಭವಗಳು, ಕಥೆಗಳು ಇತ್ಯಾದಿಗಳನ್ನು ಪ್ರತಿನಿಧಿಸುವ ಒಂದು ಸಣ್ಣ ಬರವಣಿಗೆಯಾಗಿದೆ. ಪ್ರಬಂಧಗಳು ತುಂಬಾ ವೈಯಕ್ತಿಕವಾಗಿವೆ.
ಆದ್ದರಿಂದ ನಾವು ಪ್ರಬಂಧಗಳ ಪ್ರಕಾರಗಳು, ಸ್ವರೂಪ ಮತ್ತು ಪ್ರಬಂಧ-ಬರವಣಿಗೆಯ ಸಲಹೆಗಳ ಬಗ್ಗೆ ತಿಳಿದುಕೊಳ್ಳೋಣ.
ಪ್ರಬಂಧವು ಸಾಮಾನ್ಯವಾಗಿ ಬರಹಗಾರನ ದೃಷ್ಟಿಕೋನ ಅಥವಾ ಕಥೆಯನ್ನು ವಿವರಿಸುವ ಒಂದು ಸಣ್ಣ ಬರವಣಿಗೆಯಾಗಿದೆ. ಇದನ್ನು ಸಾಮಾನ್ಯವಾಗಿ ಕಥೆ ಅಥವಾ ಕಾಗದ ಅಥವಾ ಲೇಖನಕ್ಕೆ ಸಮಾನಾರ್ಥಕವೆಂದು ಪರಿಗಣಿಸಲಾಗುತ್ತದೆ.
ಪ್ರಬಂಧಗಳು ಔಪಚಾರಿಕ ಮತ್ತು ಅನೌಪಚಾರಿಕವಾಗಿರಬಹುದು. ಔಪಚಾರಿಕ ಪ್ರಬಂಧಗಳು ಸಾಮಾನ್ಯವಾಗಿ ಶೈಕ್ಷಣಿಕ ಸ್ವರೂಪದಲ್ಲಿರುತ್ತವೆ ಮತ್ತು ಗಂಭೀರ ವಿಷಯಗಳನ್ನು ನಿಭಾಯಿಸುತ್ತವೆ.
ನಾವು ಹೆಚ್ಚು ವೈಯಕ್ತಿಕ ಮತ್ತು ಸಾಮಾನ್ಯವಾಗಿ ಹಾಸ್ಯದ ಅಂಶಗಳನ್ನು ಹೊಂದಿರುವ ಅನೌಪಚಾರಿಕ ಪ್ರಬಂಧಗಳ ಮೇಲೆ ಕೇಂದ್ರೀಕರಿಸುತ್ತೇವೆ.
ಪ್ರಬಂಧ ಎಂದರೇನು?
ಇದು ಲೇಖಕನ ಆಲೋಚನೆಯನ್ನು, ಸ್ವಂತ ವಾದವನ್ನು ಮತ್ತು ಅಭಿಪ್ರಾಯವನ್ನು ಲಿಖಿತವಾಗಿ ಅಭಿವ್ಯಕ್ತಿಸುವ ಹಾಗೂ ನಿರ್ದಿಷ್ಟ ವಿಷಯಗಳನ್ನು ಕ್ರಮಬದ್ಧ ರೀತಿಯಲ್ಲಿ ಸಮರ್ಪಕವಾಗಿ ಗದ್ಯ ರೂಪದಲ್ಲಿ ನಿರೂಪಿಸುವ ಸಾಹಿತ್ಯ ಪ್ರಕಾರವಾಗಿದೆ.
ಪ್ರಬಂಧ ಬರೆಯುವವರನ್ನು ಪ್ರಬಂಧಕಾರರು ಎನ್ನಲಾಗುತ್ತದೆ. 20ನೆಯ ಶತಮಾನದಲ್ಲಿ ವೈವಿಧ್ಯಪೂರ್ಣವಾಗಿ ಬೆಳೆದ ಸಾಹಿತ್ಯ ಪ್ರಕಾರಗಳಲ್ಲಿ ಪದಗಳ ಬಂಧ ಅಂದರೆ ಪ್ರಬಂಧವು ಕೂಡ ಒಂದು.
ಪ್ರಬಂಧದ ಗುರಿ
ವಿಷಯದ ಆಳ ಮತ್ತು ವಿಸ್ತಾರದ ಬಗ್ಗೆ ತಿಳುವಳಿಕೆ ನೀಡುವುದು ಪ್ರಬಂಧದ ಮುಖ್ಯ ಗುರಿಯಾಗಿದೆ.
ಪ್ರಬಂಧದ ವಿಧಗಳು ಎಷ್ಟು?
ಪ್ರಬಂಧದ ವಿಧಗಳು ಹಾಗೆ ನೋಡಿದರೆ ಪ್ರಬಂಧವನ್ನು ರಚನೆ, ವಸ್ತು, ಉದ್ದೇಶ, ತಾರ್ಕಿಕ ಸಂಯೋಜನೆ, ವಸ್ತುನಿಷ್ಠತೆ, ಇತ್ಯಾದಿಗಳ ಆಧಾರದ ಮೇಲೆ ಬಹಳ ವಿಧಗಳಾಗಿ ವಿಂಗಡಿಸಬಹುದು. ಆದರೆ, ಪ್ರಬಂಧವನ್ನು ಮುಖ್ಯವಾಗಿ ಈ ಕೆಳಗಿನಂತೆ ವಿಂಗಡಿಸಬಹುದು.
ವರ್ಣನಾತ್ಮಕ ಪ್ರಬಂಧಗಳು
ಈ ರೀತಿಯ ಪ್ರಬಂದದಲ್ಲಿ ವಸ್ತು ವಿಷೇಷದ ಜೀವಂತ ವರ್ಣನೆ ಇರುತ್ತದೆ. ಈ ರೀತಿಯ ಪ್ರಬಂದಗಳಲ್ಲಿ ಹೆಚ್ಚಾಗಿ ಪ್ರಾಣಿ ಪಕ್ಷಿಗಳು,ಕಾಡು ಮೇಡು, ಮಳೆಗಾಲ, ವಿಜ್ಞಾನ ವಿಕಾಸವಾದ ಮುಂತಾದ ವಿಷಯಗಳನ್ನು ಒಳಗೊಂಡಿರುತ್ತವೆ.
ವಿವರಣಾತ್ಮಕ ಪ್ರಬಂಧಗಳು
ಈ ರೀತಿಯ ಪ್ರಬಂದದಲ್ಲಿ ಯುದ್ದಗಳು,ಪೌರಾಣಿಕ ವೃತ್ತಾಂತರಗಳ ದರ್ಷನವಿರುತ್ತದೆ. ಸಾಮಾನ್ಯವಾಗಿ ಪುರಾಣ,ಐತಿಹಾಸಿಕ,ಆತ್ಮಕಥೆ,ನೈಸರ್ಗಿಕ ಅವಘಡಗಳು, ಅಪಘಾತ, ಪ್ರವಾಸ ಸಹಜ ಅಥವಾ ಕಾಲ್ಪನಿಕ ಕಥೆಗಳು ಮೊದಲಾದವುಗಳಿಗೆ ಸಂಬಂದಿಸಿದ್ದಾಗಿರುತ್ತದೆ.
ವೈಚಾರಿಕ ಪ್ರಬಂಧಗಳು
ಈ ರೀತಿಯ ಪ್ರಬಂದದಲ್ಲಿ ಯೋಚನೆ ಅತ್ಯಗತ್ಯ. ಇಲ್ಲಿ ವಿಚಾರ ಅಥವಾ ಬುದ್ದಿತ್ವದ ಅಧಿಕತೆ ಬರುತ್ತದೆ, ತರ್ಕ, ವ್ಯಾಕ್ಯಾನಗಳ ಸಮಾವೇಷವಿರುತ್ತದೆ ಹಾಗು ಭಾಷೆ ಸ್ವಲ್ಪ ಕಠಿಣವಾಗಿಯೂ ನಿಗೂಡವಾಗಿಯೂ ಇರುತ್ತದೆ.
ಕಾಲ್ಪನಿಕ ಪ್ರಬಂಧಗಳು
ತನ್ನ ಸ್ವಂತ ಅನುಭವಕ್ಕೆ ಬಾರದಿದ್ದರೂ, ತಾನಲ್ಲದಿದ್ದರೂ ಆದಂತೆ ಕಲ್ಪಿಸಿ ಅಥವಾ ಭಾವಿಸಿಕೊಂಡು ಬರೆಯುವುದು.ಉದಾಹರಣೆಗೆ ನಾನು ಪ್ರದಾನಮಂತ್ರಿಯಾದರೆ,ಶಿಕ್ಷಕನಾದರೆ,ಆಗರ್ಭ ಶ್ರೀಮಂತನಾದರೆ, ಪ್ರಾಣಿಯಾದರೆ ಹೀಗೆ ವಿಷಯಗಳನ್ನು ಒಳಗೊಂಡಿರುತ್ತದೆ.
ಉತ್ತಮ ಪ್ರಬಂಧದ ಲಕ್ಷಣಗಳು
ವಿಚಾರದ ಏಕತೆ : ಗೊಂದಲಕ್ಕೆ ಅವಕಾಶವಿಲ್ಲದಂತೆ ಯಾವುದಾದರೊಂದು ನಿರ್ದಿಷ್ಟ ಉದ್ದೇಶದೊಂದಿಗೆ ವಿಷಯವನ್ನು ವಿಸ್ತರಿಸಬೇಕು.
ಪ್ರಬಂಧದ ಮುಕ್ತಾಯ ಭಾಗವಾದ ಈ ಉಪಸಂಹಾರದಲ್ಲಿ ವಿಷಯದ ಬಗ್ಗೆ ಇರುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮಾರ್ಗಗಳು, ಸಲಹೆಗಳು, ತಜ್ಞರ ತೀರ್ಮಾನಗಳು ಹಾಗೂ ನಿಮ್ಮ ಅಭಿಪ್ರಾಯಗಳು ನೀಡುವುದರಿಂದ ಪ್ರಬಂಧವು ತುಂಬಾ ಗಟ್ಟಿಯಾದಂತೆ ಆಗುತ್ತದೆ.
ಕ್ರಮಬದ್ಧತೆ : ಬರೆಯಲು ಪ್ರಾರಂಭಿಸುವ ಮುನ್ನ ಏನನ್ನು ಬರೆಯಬೇಕು . ಯಾವುದು ಮೊದಲು ಯಾವುದು ಆನಂತರ ಕೊನೆಯಲ್ಲಿ ಎಂಬುದರ ಬಗ್ಗೆ ಒಂದು ಚೌಕಟ್ಟನ್ನು ಹಾಕಿಕೊಂಡು ವ್ಯವಸ್ಥಿತವಾದ ಆಲೋಚನೆ , ನಿರ್ದಿಷ್ಟ ಅಥವಾ ಖಚಿತ ತೀರ್ಮಾನವಿರಬೇಕು .
ವಿಷಯ ಜೋಡಣೆ ಅಚ್ಚುಕಟ್ಟಾಗಿರಬೇಕು . ಯಾವುದಕ್ಕೆ ಹೆಚ್ಚು ಒತ್ತು ನೀಡಬೇಕು ಎಂಬುದರ ಬಗ್ಗೆ ಖಚಿತ ಹಾಗೂ ಸ್ಪಷ್ಟವಾದ ಕಲ್ಪನೆ ಇರಬೇಕು
ವೈವಿಧ್ಯತೆ : ವಿಷಯಕ್ಕೆ ಪೂರಕವಾದ ವಿವಿಧ ದೃಷ್ಟಿಕೋನಗಳಿಂದ ಕೂಡಿದ ವೈವಿಧ್ಯತೆಯಿರಬೇಕು . ಪುನರಾವರ್ತನ ಏಕತಾನತೆಗೆ ಅವಕಾಶವಿಲ್ಲದಂತೆ ಬಳಸುವ ಗಾದೆ ಅಥವಾ ನುಡಿಗಟ್ಟು ಹೊಂದಿಕೆಯಾಗುವಂತಿರಬೇಕು
ವಿಷಯ ಸಂಗ್ರಹಣೆ : ಸರಳವಾದ ವಿಷಯಗಳಿಗೆ ಹೆಚ್ಚು ವಿಷಯ ಸಂಗ್ರಹದ ಅಗತ್ಯವಿರುವುದಿಲ್ಲ . ಆದರೆ ಕೆಲವು ವಿಷಯಗಳಿಗೆ ವಿಶೇಷ ಮಾಹಿತಿಗಳ ಅಗತ್ಯವಿರುವುದರಿಂದ ಆರಿಸಿಕೊಂಡ ವಿಷಯವನ್ನು ಕುರಿತು ಬರೆಯುವಾಗ ಸಾಧ್ಯವಿರುವ ಎಲ್ಲಾ ವಿಚಾರ ಮತ್ತು ಸಂಗತಿಗಳನ್ನು ಕಲೆಹಾಕಬೇಕು . ಅಂಕಿ – ಅಂಶಗಳ ಕಡೆಗೂ ಗಮನ ಕೊಡಬೇಕು.
ಪ್ರಬಂಧ ರಚನೆಯ ಮೂರು ಮುಖ್ಯ ಹಂತಗಳು
ಪೀಠಿಕೆಯು ಪ್ರಬಂಧ ರಚನೆಯ ಮೊದಲ ಹಂತವಾಗಿದ್ದು, ಇದು ಸಂಕ್ಷಿಪ್ತವಾಗಿರಬೇಕು. ಇದರ ಆರಂಭವು ಆಕರ್ಷಕ ಮತ್ತು ಪರಿಣಾಮಕಾರಿ ಆಗಿರಬೇಕು. ಇಲ್ಲಿ ಗುರಿ ಮತ್ತು ವಿಷಯ ಖಚಿತತೆಯನ್ನು ಸ್ಪಷ್ಟಪಡಿಸಬೇಕು.
ಓದುಗರಿಗೆ ವಿಷಯದ ಕುರಿತು ಆಸಕ್ತಿ ಮೂಡಿಸುವಂತೆ ಪ್ರಬಂಧವನ್ನು ಆರಂಭ ಮಾಡಬೇಕು.
ಪೀಠಿಕೆಯು ಪ್ರಬಂಧದ ಬಾಗಿಲು ಇದ್ದಂತೆ. ಓದುಗರನ್ನು ನಿಮ್ಮ ವಿಷಯದ ಒಳಗೆ ಹೇಗೆ ಬರಮಾಡಿಕೊಳ್ಳುತ್ತೀರಿ ಎಂಬುದು ಇದರ ಮೇಲೆ ನಿರ್ಧಾರವಾಗಿರುತ್ತದೆ. ಹಾಗಾಗಿ ಪ್ರಬಂಧದ ವಿಸ್ತಾರಕ್ಕೆ ಸಂಬಂಧಿಸಿದಂತೆ ಚಿಕ್ಕದಾಗಿ ಮತ್ತು ಚೊಕ್ಕದಾಗಿ ಕೆಲವು ವಾಕ್ಯಗಳನ್ನು ಇದರಲ್ಲಿ ಬರೆದಿರಬೇಕು.
2. ವಿಷಯ ನಿರೂಪಣೆ
ಇದನ್ನು ಪ್ರಬಂಧದ ಒಡಲು, ಜೀವಾಳ ಅಥವಾ ಶರೀರ ಎಂದು ಕರೆಯುತ್ತಾರೆ. ಏಕೆಂದರೆ ಇದು ಪ್ರಬಂಧದ ಮುಖ್ಯ ಭಾಗವಾಗಿದೆ. ನಾವು ವಿವರಿಸಬೇಕಾದ ವಿಷಯವನ್ನು ಖಚಿತವಾಗಿ, ನಿಶ್ಚಿತ ರೂಪರೇಷಗಳೊಂದಿಗೆ, ಪೂರ್ಣ ಮಾಹಿತಿಯೊಂದಿಗೆ ವಿಮರ್ಶಾತ್ಮಕವಾಗಿ ಬರೆಯಬೇಕು.
ಇದನ್ನು ಬರೆಯುವಾಗ ಉದಾಹರಣೆಗಳು, ನುಡಿಗಳು, ವಿಷಯಕ್ಕೆ ಸಂಬಂಧಿಸಿದ ಅಂಕಿ ಅಂಶಗಳು, ಹಾಗೂ ವಿಷಯಕ್ಕೆ ಸಂಬಂಧಿಸಿದ ಮುಖ್ಯ ಅಂಶಗಳು ಎದ್ದು ಕಾಣುವಂತಿರಬೇಕು.
ಅಂದರೆ ಅವುಗಳನ್ನು ಹೆಚ್ಚು ತಿದ್ದಿ ಬರೆಯಬೇಕು ಎಂಬುದಲ್ಲ! ಬದಲಾಗಿ ಓದುಗರಿಗೆ ಅವು ಮುಖ್ಯವಾದವು ಎನಿಸಬೇಕು.
ನೀವು ಬರೆಯುವ ಪ್ರತಿಯೊಂದು ಅಕ್ಷರ ಮತ್ತು ವಾಕ್ಯಗಳ ನಡುವೆ ಪರಸ್ಪರ ವಿಚಾರಪೂರ್ವಕ ಸಂಬಂಧವಿರಬೇಕು. ಈ ಭಾಗದಲ್ಲಿ ಸಮಸ್ಯೆಗಳಿಗೆ ಪರಿಹಾರ, ತಜ್ಞರ ಅಥವಾ ವಿಜ್ಞಾನಿಗಳ ಎಚ್ಚರಿಕೆ ಹಾಗೂ ನಿಮ್ಮ ತೀರ್ಮಾನಗಳನ್ನು ಸೇರಿಸಬಹುದು.
ಪರೀಕ್ಷೆಗಳಲ್ಲಿ ಅಂಕಗಳಿಗೆ ಆಸೆ ತೋರಿ ಅನವಶ್ಯಕವಾಗಿ ವಿಷಯವನ್ನು ಹಿಗ್ಗಿಸಬಾರದು. ಪ್ರಬಂಧ ಚಿಕ್ಕದಾದರೂ ಪರವಾಗಿಲ್ಲ ಚೊಕ್ಕದಾಗಿರಬೇಕು.
ಪ್ರಬಂಧ ಬರವಣಿಗೆಗೆ ಸಲಹೆಗಳು
೧) ಪ್ರಬಂಧ ರಚನೆಯಲ್ಲಿ ಮೊದಲಿಗೆ ಬಳಸುವ ಭಾಷೆ ಸರಳವಾಗಿರಬೇಕು.
೨) ವಿಷಯದ ನಿರೂಪಣೆ ಸಂಕ್ಷಿಪ್ತ ಮತ್ತು ನಿಖರವಾಗಿರಬೇಕು.
೩) 300-500 ಪದಗಳ ನಡುವೆ ಇರಿಸಿ. ಇದು ಆದರ್ಶ ಉದ್ದವಾಗಿದೆ, ಅದನ್ನು ಹೆಚ್ಚಿಸಲು ಅಥವಾ ಕಡಿಮೆ ಮಾಡಲು ನೀವು ಸೃಜನಾತ್ಮಕ ಪರವಾನಗಿಯನ್ನು ತೆಗೆದುಕೊಳ್ಳಬಹುದು
೪) ನಿಮ್ಮ ಭಾಷೆಯನ್ನು ಸರಳ ಮತ್ತು ಗರಿಗರಿಯಾಗಿ ಇರಿಸಿ. ಅನಗತ್ಯ ಸಂಕೀರ್ಣ ಮತ್ತು ಕಷ್ಟಕರವಾದ ಪದಗಳು ವಾಕ್ಯದ ಹರಿವನ್ನು ಮುರಿಯುತ್ತವೆ.
೫) ವ್ಯಾಕರಣ ತಪ್ಪುಗಳನ್ನು ಮಾಡಬೇಡಿ, ಸರಿಯಾದ ವಿರಾಮಚಿಹ್ನೆ ಮತ್ತು ಕಾಗುಣಿತಗಳನ್ನು ಬಳಸಿ. ಇದನ್ನು ಮಾಡದಿದ್ದರೆ ಅದು ಓದುಗರನ್ನು ವಿಷಯದಿಂದ ದೂರವಿಡುತ್ತದೆ
೬) ಭಾಷೆ ಮತ್ತು ಬರವಣಿಗೆಯು ತಪ್ಪಿಲ್ಲದಂತೆ ಎಚ್ಚರವಹಿಸಬೇಕು.
೮) ವಿಷಯದ ನಿರೂಪಣೆಯಲ್ಲಿ ಸ್ಪಷ್ಟತೆ ಮತ್ತು ನಿರ್ದಿಷ್ಟವಾದ ಗುರಿಯುಳ್ಳದ್ದಾಗಿರುವಂತೆ ಗಮನವಿರಬೇಕು.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಬಂಧ ಬರೆಯಲು ಸಲಹೆಗಳು
1. ತಪ್ಪಾದರೆ ಗೀಟುಗಳನ್ನು ಹಾಕಬಾರದು
2. ಧಾರ್ಮಿಕ ಚಿಹ್ನೆ, ಚಿತ್ರಗಳು ಮತ್ತು ವಿವಾದಾತ್ಮಕ ಹೇಳಿಕೆ ಅಥವಾ ಸಂಕೇತಗಳನ್ನು ಬಳಸಬಾರದು
3. ಯಾವುದೇ ಪುಸ್ತಕ ಅಥವಾ ಜಾಲತಾಣದಲ್ಲಿನ ಪ್ರಬಂಧಗಳನ್ನು ಬಾಯಿಪಾಠ ಮಾಡಿಕೊಂಡು ಹೋಗಿ ಬರೆಯಬಾರದು.
4. ಪ್ರಬಂಧದಲ್ಲಿ ಗಾದೆಮಾತುಗಳು, ಸೂಕ್ತಿಗಳು, ತಜ್ಞರ ಹೇಳಿಕೆಗಳು ಹಾಗೂ ಉದಾಹರಣೆಗಳನ್ನು ನೀಡಿ.
5. ಪ್ರಬಂಧವನ್ನು ಬರೆಯಲು ಶುರು ಮಾಡುವುದಕ್ಕಿಂತ ಮುಂಚೆ, ಏನೆಲ್ಲಾ ಬರೆಯಬೇಕು ಎಂಬುದರ ಕುರಿತು ಯೋಚಿಸಿಕೊಳ್ಳಿ.
ಉದಾಹರಣೆ ಗಳು
ಕುವೆಂಪು ಅವರ ಜೀವನ ಚರಿತ್ರೆ ಪ್ರಬಂಧ
ಗ್ರಂಥಾಲಯದ ಮಹತ್ವ ಪ್ರಬಂಧ
ಕೋವಿಡ್ ಮಾಹಿತಿ ಪ್ರಬಂಧ
ಪರಿಸರ ಸಂರಕ್ಷಣೆ ಪ್ರಬಂಧ
50+ಕನ್ನಡ ಪ್ರಬಂಧಗಳು
ಪ್ರಬಂಧ ಬರೆಯುವ ವಿಧಾನ | Prabandha Bareyuva Vidhana in Kannada
ಇತರ ವಿಷಯಗಳು:
ಸ್ವಚ್ಛ ಭಾರತ ಅಭಿಯಾನ ಬಗ್ಗೆ ಪ್ರಬಂಧ
ಮಹಿಳಾ ಸಬಲೀಕರಣ ಯೋಜನೆಗಳು
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ ಟೆಲಿಗ್ರಾಮ್ ಗೆ ಜಾಯಿನ್ ಆಗಿ
ಪ್ರಬಂಧ ಬರೆಯುವ ವಿಧಾನ ಬಗ್ಗೆ ಕನ್ನಡದಲ್ಲಿ ಪ್ರಭಂದ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ
Leave a Reply Cancel reply
Your email address will not be published. Required fields are marked *
Save my name, email, and website in this browser for the next time I comment.
IMAGES
VIDEO